Taste the real Alphono Mango SHOP NOW

ತಾಜಾ ಮತ್ತು ರಸಭರಿತ ಅಲ್ಫೋನ್ಸೊ ಮಾವು:ಮಾವುಗಳ ರಾಜ

By Prashant Powle  •  0 comments

ತಾಜಾ ಮತ್ತು ರಸಭರಿತ ಅಲ್ಫೋನ್ಸೊ ಮಾವು:ಮಾವುಗಳ ರಾಜ - AlphonsoMango.in

ತಾಜಾ ಮತ್ತು ರಸಭರಿತ ಅಲ್ಫೋನ್ಸೊ ಮಾವು:ಮಾವುಗಳ ರಾಜ

ಮಾವು, ಹಣ್ಣುಗಳ ಸಾಮ್ರಾಜ್ಯದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಮತ್ತು ಮಾವಿನ ಪ್ರೀಯರು, ಈ ಹಣ್ಣಿನ ಋತುವಿಗಾಗಿ ಕಾದು ಕುಳಿತಿರುತ್ತಾರೆ. ಮಾವಿನ ಕಾಯಿಯಿಂದ, ಮಾವಿನ ತೊಕ್ಕು, ಮಾವಿನಕಾಯಿ ಚಿತ್ರಾನ್ನ, ಉಪ್ಪಿನಕಾಯಿ, ರಸಂ, ಪಲ್ಯ, ಹೀಗೆ ಹಲವಾರು ಪದಾರ್ತಗಳನ್ನು ಮಾಡುತ್ತೇವೆ.

ಅದೇ ರೀತಿ ಮಾವಿನ ಹಣ್ಣಿನಿಂದ ವಿಧ ವಿಧವಾದ ಸಿಹಿತಿಂಡಿ, ತಂಪು ಪಾನೀಯ , ಮತ್ತು ಪಾನಕಗಳನ್ನು ತಯಾರಿಸುತ್ತಾರೆ.

ಅಲ್ಫೋನ್ಸೋ ಮಾವು

ಮಾವಿನ ಹಣ್ಣಿನಲ್ಲಿ ಹಲವಾರು ತಳಿಗಳಿವೆ. ಹಾಪುಸ್ ಎಂದು ಕರೆಯಲ್ಪಡುವ "ಅಲ್ಫೋನ್ಸೋ" ತಳಿಯ ಮಾವು, ಮಾವಿನ ಹಣ್ಣುಗಳ ರಾಜ ಎಂದೇ ಹೆಸರು ವಾಸಿಯಾಗಿದೆ. ಇದನ್ನು ಹ್ಯಾಫೊನ್ಸೊ, ಹ್ಯಾಪಸ್ ಎಂದು ಸಹ ಉಚ್ಚರಿಸಲಾಗುತ್ತದೆ ಮತ್ತು ಭಾರತದ ಮಹಾರಾಷ್ಟ್ರದಲ್ಲಿ ಹಪುಸ್ ಅಂಬಾ ಎಂದೇ ಹೆಸರುವಾಸಿಯಾಗಿದೆ.

ಅಲ್ಫೋನ್ಸೋ ಮಾವು, ಇದೊಂದು ಸ್ಥಳೀಯ ಹಣ್ಣಾಗಿದ್ದು ತನ್ನದೇ ಆದ ವಿಶಿಷ್ಟ ರುಚಿ, ಬಣ್ಣ, ಮತ್ತು ಸುವಾಸನೆಯಿಂದ ಹಣ್ಣುಗಳ ಸಾಮ್ರಾಜ್ಯದಲ್ಲಿ ಅಗ್ರಸ್ಥಾನ ಗಳಿಸಿದೆ. ಇದು ಸಾಮಾನ್ಯವಾಗಿ ಕೆಂಪು ಛಾಯೆಯ, ಕೇಸರಿ ಮಿಶ್ರಿತ ಕೆಂಪು ಬಣ್ಣದಿಂದ ಕೂಡಿದ್ದು, ವಿಶಿಷ್ಟ ಸಿಹಿಯಾದ ವಾಸನೆ ಹೊಂದಿರುವದರಿಂದ ಎಲ್ಲರ ಗಮನ ಸೆಳೆಯುತ್ತದೆ.

ಅಲ್ಫೋನ್ಸೋ ಮಾವಿನ ಮೂಲ ಮತ್ತು ಅದರ ಪ್ರಕಾರಗಳು

ಈ ಹಣ್ಣುಗಳನ್ನು ಪ್ರಧಾನವಾಗಿ ಭಾರತದ "ಕೊಂಕಣ" ಪ್ರದೇಶದಲ್ಲಿ ಬೆಳೆಯಲಾಗುತ್ತದೆ. ಮಹಾರಾಷ್ಟ್ರದ ರತ್ನಗಿರಿಯ ಸಿಂಧುದುರ್ಗ ಹಾಗು ಸುತ್ತಲಿನ ಪ್ರದೇಶಗಳಲ್ಲಿ ಅಲ್ಫೋನ್ಸೋ ಮಾವನ್ನು ಹೇರಳವಾಗಿ ಬೆಳೆಯುತ್ತಾರೆ.

ಮತ್ತು 2018 ರಲ್ಲಿ ಈ ಪ್ರದೇಶಕ್ಕೆ ಜಿಐ(GI) ಟ್ಯಾಗ್ ನೀಡಲಾಗಿದೆ. ವಿಶ್ವಪ್ರಸಿದ್ಧ ಅಲ್ಫೋನ್ಸೋ ಮಾವು ಭಾರತದ ಸ್ಥಳೀಯ ಹಣ್ಣಾಗಿದೆ ಎನ್ನುವುದೇ ನಮ್ಮ ಹೆಮ್ಮೆ. ಈ ಮಾವಿನ ಪ್ರಸಿದ್ಧಿಗಾಗಿ, ಭಾರತದಿಂದ ಹಲವಾರು ವಿದೇಶಗಳಿಗೆ ಅಲ್ಫೋನ್ಸೋ ವನ್ನು ರಫ್ತುಮಾಡಲಾಗುತ್ತದೆ.

ಹೆಚ್ಚು ತಾಪಮಾನದ ವಾತಾವರಣದಲ್ಲಿ ಬೆಳೆಯಲಾಗುವ ಅಲ್ಫೋನ್ಸೋ ಮಾವು, ಅತ್ಯಂತ ರುಚಿಕರ ಹಾಗು ಆರೋಗ್ಯಕರವಾಗಿರುತ್ತದೆ. ಪ್ರತಿಯೊಂದು ಹಣ್ಣು ೧೫೦ ರಿಂದ ೩೦೦ ಗ್ರಾಮ್ಸ್ ತೂಗುತ್ತದೆ.

ಇದು ರೈತರಿಗೂ, ಗ್ರಾಹಕರಿಗೂ, ಹಾಗು ವ್ಯಾಪಸ್ಥರಿಗೂ ಖುಷಿ ಮತ್ತು ಸಿಹಿ ನೀಡುವ ಸಿಹಿಯಾದ ಹಣ್ಣಾಗಿದೆ. ಆದ್ದರಿಂದ ಅಲ್ಫೋನ್ಸೋ ಬೆಳೆಯನ್ನು ಬಂಗಾರದ ಬೆಳೆ ಎಂದೂ ಸಹ ಕರೆಯುತ್ತಾರೆ.

GI ಟ್ಯಾಗ್ ಪ್ರಮಾಣೀಕೃತ ಅಲ್ಫೋನ್ಸೊ ಮಾವು

ಯಾವರೀತಿ ಮಾವಿನಲ್ಲಿ ಬಂಗನಪಲ್ಲಿ, ನೀಲಂ, ಹಾಪುಸ್, ತೋತಾಪುರಿ ಎಂಬ ತಳಿಗಳಿವೆಯೋ, ಹಾಗೆಯೆ ಅಲ್ಫೋನ್ಸೋದಲ್ಲಿಯೂ ಸಹ ದೇವಗಡ, ರತ್ನಗಿರಿ, ಕೇಸರ್, ದಶೇರಿ, ಲಾಂಗ್ರಾ ಎಂದು ಹಲವಾರು ಉಪತಳಿಗಳಿವೆ. ಅದರಲ್ಲಿ ಪ್ರಸಿದ್ಧ ಪ್ರಕಾರಗಳೆಂದರೆ ರತ್ನಗಿರಿ ಅಲ್ಫೋನ್ಸೋ, ದೇವಗಡ್ ಅಲ್ಫೋನ್ಸೋ, ಮತ್ತು ಕೇಸರ್ ಅಲ್ಫೋನ್ಸೋ.

Alphonso Mavu Online

ದೇವಗಡ ಅಲ್ಫೋನ್ಸೋ ಮಾವು

ಈ ಹಣ್ಣನ್ನು ಮಹಾರಾಷ್ಟ್ರದ ದೇವಗಡಲ್ಲಿ ಬೆಳೆಯಲಾಗುತ್ತದೆ, ಮತ್ತು ಇದು ಕಾರ್ಬೈಡು & ರಾಸಾಯನಿಕೆ ರಹಿತವಾಗಿರುತ್ತದೆ. ಸ್ವಲ್ಪ ಕಟುವಾದ (ಟ್ಯಾಂಗಿ) ಮತ್ತು ಸ್ವಲ್ಪ ಸಿಹಿಯಾದ ರುಚಿಯನ್ನು ಹೊಂದಿದ ದೇವಗಡ ಮಾವು  ಭಾರತದಾದ್ಯಂತ ಪ್ರಸಿದ್ಧವಾಗಿದೆ.

ಸುಲಭವಾಗಿ ತೊಗಟೆಯನ್ನು ಬೇರ್ಪಡಿಸಿ ಹಾಗೆಯೆ ಸೇವಿಸಬಹುದಾದ ಈ ಹಣ್ಣು, ತನ್ನದೇ ಆದ ವಿನ್ಯಾಸ ಮತ್ತು ಬಲಿಷ್ಠ ಪರಿಮಳವನ್ನು ಹೊಂದಿದೆ.  

ರತ್ನಗಿರಿ ಅಲ್ಫೋನ್ಸೋ ಮಾವು

ಈ ಮಾವನ್ನು ಅತ್ಯುತ್ತಮ ಮತ್ತು ಅತ್ಯಂತ ಸುವಾಸನೆಯ ಆಲ್ಫೋನ್ಸೊ ಮಾವಿನಹಣ್ಣು ಎಂದು ಪರಿಗಣಿಸಲಾಗಿದೆ. ಉತ್ತಮ ಗುಣಮಟ್ಟದ ರತ್ನಗಿರಿ ಮಾವು ಗ್ರಾಹಕರನ್ನು ಸುಲಭವಾಗಿ ತನ್ನತ್ತ ಸೆಳೆಯುತ್ತದೆ.

ನೈಸರ್ಗಿಕ ಸಿಹಿಯನ್ನು ಹೊಂದಿರುವ ರತ್ನಗಿರಿ ಹಣ್ಣು ದೇಶ ಮತ್ತು ವಿದೇಶಾದ್ಯಂತ ವ್ಯಾಪಕವಾಗಿ ಮಾರಾಟವಾಗುತ್ತದೆ. ರತ್ನಗಿರಿಯ ಕರಾವಳಿ ಪ್ರದೇಶದದಲ್ಲಿ ಬೆಳೆಯಲಾಗುವ ಈ ಹಣ್ಣು, ಗೋಲ್ಡನ್ ಹಳದಿ ಛಾಯೆಯೊಂದಿಗೆ ಬರುತ್ತದೆ.

ಮತ್ತು ಇದು ನಾನ್-ಫೈಬ್ರಸ್ & ರಸಭರಿತವಾದ ತಿರುಳನ್ನು ಹೊಂದಿರುತ್ತದೆ. ಅಲ್ಫೋನ್ಸೋವನ್ನು ಮಾವಿನ ಹಣ್ಣುಗಳ ರಾಜ ಎಂದರೆ, ರತ್ನಗಿರಿ ಅಲ್ಫೋನ್ಸೋ ಹಣ್ಣನ್ನು "ರಾಜರ ರಾಜ" ಎಂದು ಕರೆಯಬಹುದು.

ಕೇಸರ್ ಅಲ್ಫೋನ್ಸೋ ಮಾವು

ಇದನ್ನು ಮುಖ್ಯವಾಗಿ ಗುಜರಾತ್ ರಾಜ್ಯದ ಪರ್ವತ ಶ್ರೇಣಿಯಲ್ಲಿ ಬೆಳೆಯಲಾಗುತ್ತದೆ. ಕೇಸರ್ ಅಲ್ಫೋನ್ಸೋ ಮಾವು ವಿಶಿಷ್ಟವಾದ ಪರಿಮಳ ಮತ್ತು ಆಕರ್ಷಕ ಕೇಸರಿ ಬಣ್ಣವನ್ನು ಹೊಂದಿದ್ದು,ಅದರ ಸಿಹಿ ರುಚಿ ಮತ್ತು ರಸಭರಿತವಾದ ರಚನೆಗೆ ಹೆಸರುವಾಸಿಯಾಗಿದೆ.

ದುಂಡಗಿನ-ಓರೆಯಾದ ಆಕಾರವನ್ನು ಹೊಂದಿದ ಕೇಸರ್ ಅಲ್ಫೋನ್ಸೋ ಒಂದು ಮಧ್ಯಮ ಗಾತ್ರದ ಹಣ್ಣಾಗಿದೆ. ಗುಜರಾತಿನ ಗಿರ್ ಪ್ರದೇಶವಷ್ಟೇ ಅಲ್ಲದೆ, ಮಹಾರಾಷ್ಟ್ರದ ಕೆಲವು ಪ್ರದೇಶಗಳಲ್ಲಿಯೂ ಕೂಡ ಕೇಸರ್ ಅಲ್ಫೋನ್ಸೋ ಹಣ್ಣನ್ನು ಬೆಳೆಯುತ್ತಾರೆ.

ಅಲ್ಫೋನ್ಸೋ ಮಾವಿನಲ್ಲಿರುವ ಪೌಷ್ಠಿಕಾಂಶದ ಅಂಶಗಳು

ಶತಮಾನಗಳಿಂದಲೂ ಸುಪ್ರಸಿದ್ಧವಾಗಿರುವ ಅಲ್ಫೋನ್ಸೋ ಮಾವು ಅನೇಕ ಭಕ್ಷ್ಯಗಳನ್ನು ಪರಿಪೂರ್ಣವಾಗಿಸುವಲ್ಲಿ ಉತ್ತಮ ಆಯ್ಕೆಯಾಗಿದೆ, ಅಲ್ಲದೆ ಹಲವಾರು ಆರೋಗ್ಯಕರ ಅಂಶಗಳನ್ನು ಸಹ ಹೊಂದಿದೆ. ಅಲ್ಫೋನ್ಸೋ ಮಾವಿನಹಣ್ಣಿನ ಕೆಲವು ಪ್ರಮುಖ ಆರೋಗ್ಯ ಪ್ರಯೋಜನಗಳು ಇಲ್ಲಿವೆ:

ವಿಟಮಿನ್ ಸಿ : ಅಲ್ಫೋನ್ಸೋ ಹಣ್ಣುಗಳು, ಮಾನವ ದೇಹಕ್ಕೆ ಅತಿಮುಖ್ಯವಾದ ವಿಟಮಿನ್ ಸಿ ಯ ಉತ್ತಮ ಮೂಲವಾಗಿವೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ಮತ್ತು ಜೀವಕೋಶಗಳನ್ನು ಹಾಳಾಗದಂತೆ ತಡೆಯುವಲ್ಲಿ ಸಹಕರಿಸುತ್ತದೆ.

ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ: ಅಲ್ಫೊನ್ಸೋ ಮಾವಿನ ಹಣ್ಣಿನಲ್ಲಿ ಫೈಬರ್ ಅಧಿಕವಾಗಿದ್ದು ಮಲಬದ್ಧತೆಯನ್ನು ತಡೆಯಲು ಸಹಾಯ ಮಾಡುತ್ತದೆ.

ಕಡಿಮೆ ಕ್ಯಾಲೋರಿಗಳು: ಅಲ್ಫೊನ್ಸೊ ಮಾವಿನಹಣ್ಣುಗಳು ಕಡಿಮೆ ಕ್ಯಾಲೋರಿ ಮತ್ತು ಕಡಿಮೆ ಕೊಬ್ಬಿನಂಶವನ್ನು ಹೊಂದಿರುತ್ತವೆ, ಇದು ಆರೋಗ್ಯಕರ ರೀತಿಯಲ್ಲಿ  ತೂಕವನ್ನು ನಿರ್ವಹಿಸಲು ಪ್ರಯತ್ನಿಸುತ್ತಿರುವ ಜನರಿಗೆ ಸೂಕ್ತವಾದ ಆಯ್ಕೆಯಾಗಿದೆ.

ಚರ್ಮದ ಆರೋಗ್ಯ: ಅಲ್ಫೊನ್ಸೊ ಮಾವಿನಹಣ್ಣಿನಲ್ಲಿ ವಿಟಮಿನ್ ಸಿ ಅಧಿಕವಾಗಿರುವುದರಿಂದ, ಇದು ಕೊಲಾಜೆನ್  ಉತ್ಪಾದನೆಯನ್ನು ಉತ್ತೇಜಿಸುವ ಮೂಲಕ ಮತ್ತು ಕೋಶಗಳನ್ನು ಹಾನಿಯಿಂದ ರಕ್ಷಿಸುವ ಮೂಲಕ ಚರ್ಮದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಅಲ್ಫೋನ್ಸೋ ಪೌಷ್ಟಿಕ ಅಂಶಗಳು - 100 ಗ್ರಾಂ ಸರ್ವಿಂಗ್ ಆಧಾರದ ಮೇಲೆ

  • ಕ್ಯಾಲೋರಿಗಳು - 202 ಕ್ಯಾಲೋರಿಗಳು
  • ಪ್ರೋಟೀನ್ - 1.35 ಗ್ರಾಂ, ಅಗತ್ಯವಿರುವ ದೈನಂದಿನ ಮೌಲ್ಯದ 1%
  • ಕಾರ್ಬೋಹೈಡ್ರೇಟ್ಗಳು - 0.89 ಗ್ರಾಂ
  • ವಿಟಮಿನ್ ಎ - 765 IU, ಅಗತ್ಯವಿರುವ ದೈನಂದಿನ ಮೌಲ್ಯದ 26%
  • ವಿಟಮಿನ್ ಬಿ6 - 0.119mg, ಅಗತ್ಯವಿರುವ ದೈನಂದಿನ ಮೌಲ್ಯಗಳ 5%
  • ವಿಟಮಿನ್ ಸಿ - 36.4 ಮಿಗ್ರಾಂ, ಅಗತ್ಯವಿರುವ ದೈನಂದಿನ ಮೌಲ್ಯದ 44%
  • ಕ್ಯಾಲ್ಸಿಯಂ - 11 ಮಿಗ್ರಾಂ, ಅಗತ್ಯವಿರುವ ದೈನಂದಿನ ಮೌಲ್ಯದ 1%
  • ಕಬ್ಬಿಣ - 0.16 ಮಿಗ್ರಾಂ, ಅಗತ್ಯವಿರುವ ದೈನಂದಿನ ಮೌಲ್ಯದ 1.5%
  • ಮೆಗ್ನೀಸಿಯಮ್ - 10 ಮಿಗ್ರಾಂ, ಅಗತ್ಯವಿರುವ ದೈನಂದಿನ ಮೌಲ್ಯಗಳ 3%.

ಇದರ ಜೊತೆಗೆ, ಅಲ್ಫೋನ್ಸೋ ಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ ಎ, ಸಿ, ಈ, ಕಬ್ಬಿಣ, ಕ್ಯಾಲ್ಸಿಯಂ ಮತ್ತು ಪೊಟ್ಯಾಸಿಯಮ್ ಅಂಶಗಳು ಕೂಡ ಇವೆ.

ಸೂಕ್ತವಾದ ರೀತಿಯಲ್ಲಿ ಸೇವಿಸುವುದರಿಂದ ಅಫೋನ್ಸೋ ದೇಹಕ್ಕೆ ತುಂಬಾ ಒಳ್ಳೆಯ ಹಣ್ಣಾಗಿದೆ. ಆದರೆ, ನಿಮ್ಮ ಆಹಾರದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.

ಉತ್ತಮ ಮತ್ತು ಪ್ರೀಮಿಯಂ ಗುಣಮಟ್ಟದ ಅಲ್ಫೋನ್ಸೊ ಮಾವಿನಹಣ್ಣುಗಳನ್ನು ಎಲ್ಲಿಂದ ಖರೀದಿಸಬಹುದು?

ಅಲ್ಫೋನ್ಸೋ ಒಂದು ಸೀಸನಲ್ (ಕಾಲೋಚಿತ) ಹಣ್ಣಾಗಿದ್ದು, ವರ್ಷದ ಕೆಲವೇ ತಿಂಗಳಲ್ಲಿ ಮಾತ್ರ  ಲಭ್ಯವಿರುತ್ತದೆ. ಮುಖ್ಯವಾಗಿ, ಇದು ಏಪ್ರಿಲ್ ತಿಂಗಳ ಮದ್ಯದಿಂದ ಜೂನ್ ತಿಂಗಳ ಕೊನೆಯವರೆಗೆ ಮಾತ್ರ ಸಿಗುತ್ತದೆ.

ಆದ್ದರಿಂದ ಅಲ್ಫೋನ್ಸೋ ಮಾವಿನ ಹಣ್ಣಿನ ನಿಜವಾದ ಮತ್ತು ಪಾರಂಪರಿಕ ರುಚಿಯನ್ನು ಸವಿಯಲು, ನೇರ ಬೆಳೆಗಾರರಿಂದ ಅಥವಾ ವಿಶೇಷವಾಗಿ ಅಲ್ಫೋನ್ಸೋ ಹಣ್ಣನು ಮಾತ್ರ ಬೆಳೆಯುವ/ಮಾರುವ ವರ್ತಕರಿಂದ ಖರೀದಿಸುವುದು ಒಳ್ಳೆಯದು.

ಹಲವಾರು ವೆಬ್‌ಸೈಟ್‌ಗಳು ಆನ್‌ಲೈನ್‌ನಲ್ಲಿ ಮಾವಿನ ಹಣ್ಣುಗಳನ್ನು ಮಾರಾಟ ಮಾಡುವ ಪರಿಣತಿ ಹೊಂದಿವೆ. ಈ ರೀತಿಯ, ಅಲ್ಫೋನ್ಸೋ ಮಾರಾಟದಲ್ಲಿ ಪ್ರಸಿದ್ದವಾಗಿರುವ ಒಂದು ಭಾರತದ ವೆಬ್ಸೈಟ್ ಎಂದರೆ ಅಲ್ಫೋನ್ಸೋಮ್ಯಾಂಗೋ.ಇನ್ (alphonsomango.in).

ಇದು ಹಲವಾರು ವರ್ಷಗಳಿಂದ, ವಿವಿಧ ರೀತಿಯ ಅಲ್ಫೋನ್ಸೋ ಹಣ್ಣುಗಳನ್ನು ಮಾರಾಟ ಮಾಡುತ್ತಿದೆ. ಇಲ್ಲಿ ಸಿಗುವ ಹಣ್ಣುಗಳು ಪೂರ್ಣ ರೂಪವಾಗಿ ನೈಸರ್ಗಿಕವಾಗಿದ್ದು ಕಾರ್ಬೈಡ್ ರಹಿತವಾಗಿವೆ. ಉತ್ತಮ ರೀತಿಯ ಬೆಳೆ ಮತ್ತು ಪಾಲನೆಗಾಗಿ, ಈ ಕಂಪನಿ ಜಿಐ ಸರ್ಟಿಫೈಡ್ ಕೂಡ ಆಗಿದೆ.

ಈ ಸೈಟ್‌ನಿಂದ ನಿಯಮಿತವಾಗಿ ಮಾವಿನಹಣ್ಣುಗಳನ್ನು ಖರೀದಿಸುವ ಹಲವಾರು ಗ್ರಾಹಕರು ಉತ್ತಮ ವಿಮರ್ಶೆಗಳನ್ನು ಮತ್ತು ಅನುಭವವನ್ನು ಹಂಚಿಕೊಂಡಿದ್ದಾರೆ. ಹಾಗಾಗಿ ಅಲ್ಫೋನ್ಸೋ ಮಾವಿನಹಣ್ಣಿನ ವಿಶೇಷತೆಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ವೆಬ್‌ಸೈಟ್‌ಗೆ ನೇರವಾಗಿ ಭೇಟಿ ನೀಡಿ.

ರಾಷ್ಟ್ರವ್ಯಾಪಿಯಾಗಿ ಶಿಪ್ಪಿಂಗ್‌ ಲಭ್ಯವಿರುವ, ಕೈಯಿಂದ ಆರಿಸಿದ ಅಧಿಕೃತ ಅಲ್ಫೋನ್ಸೊ ಮಾವಿನ ಹಣ್ಣಿನ ಸಿಹಿ ಮತ್ತು ರಸಭರಿತವಾದ ರುಚಿಯನ್ನು ಇಂದೇ ಅನುಭವಿಸಿ. ನಮ್ಮ ವೆಬ್‌ಸೈಟ್‌ನಿಂದ ನೇರವಾಗಿ ನಿಮ್ಮ ಬಾಗಿಲಿಗೆ ತಲುಪಿಸಲಾಗುವುದು.

ಅಲ್ಫೋನ್ಸೋ ಹಣ್ಣಿನ ಸಂಗ್ರಹಣೆ ಮತ್ತು ಸಂರಕ್ಷಣೆಯ ವಿಧಾನಗಳು

  • ಅಲ್ಫೋನ್ಸೋ ಪೂರ್ತಿಯಾಗಿ ಹಣ್ಣಾಗದಿದ್ದರೆ, ಅವುಗಳನ್ನು ಕೋಣೆಯ ಉಷ್ಣಾಂಶದಲ್ಲಿ ಒಂದು ಕಾಗದದ ಅಥವಾ ಪ್ಲಾಸ್ಟಿಕ್ ಹೊದಿಕೆಯಿಂದ ಮುಚ್ಚಿ ಇರಿಸುವುದರಿಂದ ಇದು ಹಣ್ಣಾಗುವ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ ಮತ್ತು ಹಣ್ಣನ್ನು ಮೃದುವಾಗಿ ಮತ್ತು ಸಿಹಿಯಾಗಿ ಮಾಡುತ್ತದೆ.
  • ಬೆಚ್ಚಗಿನ ವಾತಾವರಣದಲ್ಲಿ ಮಾವು ಹಣ್ಣಾಗುತ್ತದೆ. ಆದ್ದರಿಂದ ಪೂರ್ಣವಾಗಿ ಬಲಿಯದ ಹಣ್ಣನ್ನು ಫ್ರಿಡ್ಜ್ ನಲ್ಲಿ ಇರಿಸಬೇಡಿ (ಶೈತ್ಯೀಕರಣಗೊಳಿಸಬೇಡಿ). ಬದಲಾಗಿ ಅವುಗಳನ್ನು ಕೋಣೆಯ ಉಷ್ಣಾಂಶದಲ್ಲಿ ಇರಿಸಿ ಮತ್ತು ನೇರವಾಗಿ ಸೂರ್ಯನ ಬೆಳಕಿನಿಂದ ದೂರವಿಡಿ.
  • ಅವುಗಳನ್ನು ಅತಿಯಾಗಿ ಹಣ್ಣಾಗದಂತೆ ತಡೆಯಲು, ಸ್ವಲ್ಪ ಮಾಗಿದ ನಂತರ ರೆಫ್ರಿಜರೇಟರ್‌ಗಳಲ್ಲಿ ಇಡಬೇಕು
  • ಹಣ್ಣಾದ ಅಲ್ಫೋನ್ಸೋ ಮಾವನ್ನು ಒಂದು ವಾರದ ವರೆಗೆ ಫ್ರಿಡ್ಜ್ ನಲ್ಲಿ ಇರಿಸಿ ಸೇವಿಸಬಹುದು.
  • ಅಲ್ಫೋನ್ಸೋ ಮಾವಿನ ಒಳಭಾಗವನ್ನು (ಫ್ಲೆಶ್) ಬಿಗಿಯಾದ ಕಂಟೇನರ್ ನಲ್ಲಿ ಮುಚ್ಚಿ, ಫ್ರೀಜರ್‌ಗಳಲ್ಲಿ ಸರಿಸುಮಾರು ಆರು ತಿಂಗಳವರೆಗೆ ಇಡಬಹುದು, ಮತ್ತು ಬೇಕಾದಾಗ ಸೇವಿಸಬಹುದು.

ಬಾಯಲ್ಲಿ ನೀರೂರಿಸುವ ಅಲ್ಫೋನ್ಸೋ ಮಾವಿನ ಪಾಕವಿಧಾನಗಳು

ಅಲ್ಫೋನ್ಸೋ ಹಣ್ಣನ್ನು ಹಾಗೆಯೆ ಸೇವಿಸುವುದರ ಜೊತೆಗೆ, ಹಲವಾರು ರೀತಿಯ ಭಕ್ಷಗಳು ಹಾಗು ಸಿಹಿತಿಂಡಿಗಳನ್ನು ಸಹ ಮಾಡಲಾಗುತ್ತದೆ. ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಕೂಡ ಅಲ್ಫೋನ್ಸೋ ಹಣ್ಣಿಗೆ ಬಹು ಬೇಡಿಕೆಯಿದೆ. ಅಲ್ಫೋನ್ಸೋ ಹಣ್ಣುಗಳಿಂದ ಮಾಡಬಹುದಾದ ಕೆಲವು ಸಿಹಿತಿಂಡಿಗಳು ಕೆಳಕಂಡಂತಿವೆ.

ಅಲ್ಫೋನ್ಸೋ ಮಾವಿನ ಕುಲ್ಫಿ: ಮಂದಗೊಳಿಸಿದ ಹಾಲು,ಕೆನೆ ಮತ್ತು ಅಲ್ಫೋನ್ಸೊ ಮಾವಿನ ಪ್ಯೂರಿಯಿಂದ ಮಾಡಲಾಗುವ ಸಾಂಪ್ರದಾಯಿಕ ಸಿಹಿತಿಂಡಿ. ಇದನ್ನು ಸಾಮಾನ್ಯವಾಗಿ ಪಿಸ್ತಾ ಅಥವಾ ಬಾದಾಮಿಗಳಿಂದ ಅಲಂಕರಿಸಲಾಗುತ್ತದೆ.

ಅಲ್ಫೋನ್ಸೋ ಹಣ್ಣಿನ ಪುಡ್ಡಿಂಗ್: ಅಲ್ಫೊನ್ಸೊ ಮಾವಿನ ಪ್ಯೂರೀ, ಹಾಲು, ಸಕ್ಕರೆ ಮತ್ತು ಕಾರ್ನ್‌ಸ್ಟಾರ್ಚ್‌ನಿಂದ ತಯಾರಿಸಿದ ರುಚಿಕರವಾದ ಪುಡಿಂಗ್. ಇದನ್ನು ಸಾಮಾನ್ಯವಾಗಿ ತಣ್ಣಗಾದ ಮತ್ತು ತಾಜಾ ಹಣ್ಣುಗಳಿಂದ ಅಲಂಕರಿಸಲಾಗುತ್ತದೆ.

ಅಲ್ಫೋನ್ಸೋ ಮಾವೀನ ಶ್ರೀಖಂಡ್: ಮೊಸರು, ಸಕ್ಕರೆ, ಏಲಕ್ಕಿ ಮತ್ತು ಅಲ್ಫೋನ್ಸೋ ಮಾವಿನ ಪ್ಯೂರೀಯಿಂದ ತಯಾರಿಸಬಹುದಾದ ಸಾಂಪ್ರದಾಯಿಕ ಭಾರತೀಯ ಸಿಹಿ ಭಕ್ಷ್ಯವಾಗಿದೆ.

ಅಲ್ಫೋನ್ಸೋ  ಪಾನಕ ಅಥವಾ ಸೊರ್ಬೇಟ್: ಅಲ್ಫೊನ್ಸೊ ಮಾವು, ಸಕ್ಕರೆ ಮತ್ತು ನಿಂಬೆ ರಸದಿಂದ ತಯಾರಿಸಬಹುದಾದ ರಿಫ್ರೆಶ್ ಪಾನಕ, ಬೇಸಿಗೆಯ ದಿನಗಳಲ್ಲಿ ದೇಹವನ್ನು ತಂಪಾಗಿರಿಸಲು ಸಹಕರಿಸುತ್ತದೆ.

ಹಪಸ್ ಮಾವು

ತನ್ನದೇ ಆದ ಗುಣ-ಲಕ್ಷಣಗಳಿಂದ,  ಹಣ್ಣಿನ ಮಾರುಕಟ್ಟೆಯಲ್ಲಿ ವಿರಾಜಮಾನವರಿಗುವ ಅಲ್ಫೋನ್ಸೋ ಮಾವಿನ ಹಣ್ಣು, ಏಪ್ರಿಲ್ ನಿಂದ ಜೂನ್ ತಿಂಗಳಲ್ಲಿ ಆಕರ್ಷಣೆಯ ಕೇಂದ್ರ ಬಿಂದುವಾಗಿರುತ್ತದೆ.

ಆ ಸಮಯದಲ್ಲಿ ಪ್ರತಿ ಮನೆಯಲ್ಲಿಯೂ ರಾಜ್ಯಭಾರ ಮಾಡುವ ಏಕೈಕ ಹಣ್ಣೆಂದರೆ ಅದು ಹಾಪುಸ್ ಮ್ಯಾಂಗೋ - ಅಲ್ಫೋನ್ಸೋ ಮ್ಯಾಂಗೋ.ಅಲ್ಫೋನ್ಸೊ ಮಾವಿನಹಣ್ಣುಗಳು ನಿಜವಾಗಿಯೂ ಸವಿಯಾದ ಪದಾರ್ಥವಾಗಿದ್ದು, ಅವುಗಳ ವಿಶಿಷ್ಟವಾದ ಸಿಹಿ ಮತ್ತು ರಸಭರಿತವಾದ ಪರಿಮಳಕ್ಕಾಗಿ ಅನೇಕರು ಇಷ್ಟಪಡುತ್ತಾರೆ.

ಅಲ್ಫೋನ್ಸೊ ಮಾವು ಆನ್ಲೈನ್

ಅತ್ಯಂತ ಉತ್ತಮ ಗುಣಮಟ್ಟದ ಅಲ್ಫೋನ್ಸೋ ಹಣ್ಣುಗಳನ್ನು ನಿಮಗೆ ನೀಡಲು, ಇವುಗಳನ್ನು ಕೈಯಿಂದ ಆರಿಸಲಾಗುತ್ತದೆ ಮತ್ತು ನಿಮ್ಮ ಮನೆಗೆ ತಾಜಾವಾಗಿ ತಲುಪಿಸಲಾಗುತ್ತದೆ.

ಅವುಗಳನ್ನು ಕೇವಲ ಹಣ್ಣಾಗಿ ತಿನ್ನುತ್ತಿರಲಿ, ಅಥವಾ ಪಾಕವಿಧಾನಕ್ಕೆ ಬಳಸಲಿ, ಅಥವಾ ಸ್ನೇಹಿತರಿಗೆ ಉಡುಗೊರೆಯಾಗಿ ನೀಡುತ್ತಿರಲಿ, ಅಲ್ಫೋನ್ಸೊ ಮಾವಿನಹಣ್ಣುಗಳು ನಿಮ್ಮ ರುಚಿ ಮೊಗ್ಗುಗಳನ್ನು ಆನಂದಿಸುವುದು ಖಚಿತ.

“ಆದ್ದರಿಂದ ಈ ಪರಿಪೂರ್ಣ ಬೇಸಿಗೆ ಹಣ್ಣನ್ನು ಇಂದೇ ಖರೀದಿಸಿ ಮತ್ತು ಅಲ್ಫೋನ್ಸೋ ಮಾವಿನ ಹಣ್ಣುಗಳಿಂದ ನಿಮ್ಮ ಬೇಸಿಗೆಯನ್ನು ತಂಪಾಗಿರಿಸಿ.”

Tropical fruit

ರತ್ನಗಿರಿ ಹಪಸ್ ಮಾವು

ಬೆಂಗಳೂರಿನಲ್ಲಿ ಅಲ್ಫೋನ್ಸೋ ಮಾವು

Alphonso Mango Online Coimbatore

Alphonso mango online Chennai

Mangoes Online Bangalore

Alphonso Mango in Bangalore

Mango delivery in Mangalore

Mango delivery in Karnataka

Alphonso mango in Belgaum

Dry fruit shop in Karnataka

Mango Online Hyderabad

Alphonso Mango Hyderabad

ರತ್ನಗಿರಿ ಅಲ್ಫೋನ್ಸೋ ಮಾವು

ರತ್ನಗಿರಿ ಅಲ್ಫೋನ್ಸೋ ಮಾವು

ಗೋಡಂಬಿ ಖರೀದಿಸಿ

Mango Delivery

Alphonsomango.in

Karnataka Mango Online

Send Mango Delivery

Mango Pulp Online at Alphonsomango.in

Mango

Ratnagiri Alphonso Mango in Bangalore

Alphonsomango.in for premium Mangoes

Mango Online Chennai

Previous Next